ಮಾಲ್‌ನಿಂದ ಹಾರಿದ ಕೋಮಲ್ ವಾರೆ..ವ್ಹಾ!
Posted date: 21/July/2010

ಜೆ.ಜೆ. ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ನಟ-ನಿರ್ಮಾಪಕ ಜೈಜಗದೀಶ್ ನಿರ್ಮಿಸುತ್ತಿರುವ ಹಾಸ್ಯ ಕೌಟುಂಬಿಕ  ವಾರೆ..ವ್ಹಾ! ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಇದೇ ೧೬ ರಂದು ನಗರದಲ್ಲಿ ಮುಕ್ತಾಯಗೊಂಡಿತು.
    ಹತ್ತೊಂಭತ್ತು ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ ಮಾಲ್ ಒಚಿದರಲ್ಲಿ ಅವಿತುಕೊಂಡಿದ್ದ ಉಗ್ರಗಾಮಿಗಳನ್ನು ಹಿಡಿಯಲು ಮಾಲ್ ಮೇಲಿಂದ ಹಾರಿಬಂದ ನಾಯಕನಟ ಕೋಮಲ್ ಆ ಉಗ್ರಗಾಮಿಗಳನ್ನು ಹಿಡಿಯುವ ಸನ್ನಿವೇಶವನ್ನು ಹಾಗೂ ಪಾರ್ವತಿ, ಫ್ಲೋರಾಶೈನಿ, ಭಾವನಾರಾವ್ ಅಭಿನಯದ ಹಲವಾರು ಸನ್ನಿವೇಶಗಳನ್ನು ಕಂಠೀರವ ಸ್ಟುಡಿಯೋ, ವಿಜಯನಗರ, ಆರ್.ಟಿ. ನಗರ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ರಮೇಶ್ ಬಾಬು ಛಾಯಾಗ್ರಹಣದಲ್ಲಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಚಿತ್ರಿಸಿಕೊಂಡರು. ಸಾಹಸ ಸನ್ನಿವೇಶವೊಂದರಲ್ಲಿ ಗೋಪಾಲ್ ಮಾಲ್‌ನಲ್ಲಿ ಡ್ಯೂಪ್ ಇಲ್ಲದೆ ೮೦ ಅಡಿ ಮೇಲಿಂದ ಹಾರಿಅ ಅಭಿನಯಿಸಿದ  ಕೋಮಲ್‌ಕುಮಾರ್ ಇಡೀ ಚಿತ್ರ ತಂಡದ ಪ್ರಶಂಸೆಗೆ ಪಾತ್ರರಾದರು.
    ಚಿತ್ರದ ಟಾಕಿ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಆಗಸ್ಟ್ ಮೊದಲವಾರದಿಂದ ಗೀತೆಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ  ಜೈಜಗದೀಶ್ ತಿಳಿಸಿದ್ದಾರೆ.
    ಚಿತ್ರಕ್ಕೆ ಶಂಕರ್‌ಬಿಲ್ಲೆ ಮನೆ, ಮಗೇಶ್ ಸಂಭಾಷಣೆ, ಕವಿರಾಜ್, ವಿಮನೋಹರ್, ನಾಗೇಂದ್ರ ಪ್ರಸಾದ್, ಸುಧೀರ್ ಅತ್ತಾವರ್ ರವರ ಗೀತೆಗಳು, ವೀನಸ್ ಮೂರ್ತಿ ಛಾಯಾಗ್ರಹಣ, ಅವಿನಾಶ್ ವಿಶ್ವಜಿತ್ ಸಂಗೀತ, ಈಶ್ವರಿಕುಮಾರ್ ಕಲೆ, ಕೆಂಪರಾಜ್ ಸಂಕಲನ, ಮುರಳಿ ಹರ್ಷ ನಿರ್ವಹಣೆ, ರುದ್ರೇಶ್ ನಿರ್ದೇಶನ ಸಹಕಾರವಿದ್ದು ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಶ್ರೀಮತಿ ವಿಜಯಲಕ್ಷ್ಮಿ ಸಿಂಣ್.
    ತಾರಾಗಣದಲ್ಲಿ ಕೋಮಲ್‌ಕುಮಾರ್, ಭಾವನಾರಾವ್, ಸಂಭ್ರಮ, ಪಾರ್ವತಿ, ಫ್ಲೋರಾಶೈನಿ, ಉಮಾಶ್ರೀ, ಕರಿಬಸವಯ್ಯ, ಪದ್ಮಜಾರಾವ್, ಕಿಶೋರಿ ಬಲ್ಲಾಳ್, ಹೊನ್ನಾವಳ್ಳಿ ಕೃಷ್ಣ, ಪ್ರಕಾಶ್ ಶೆಣೈ, ರವೀಚಿದ್ರನಾಥ್, ಶೈಲಜಾ ಜೋಷಿ, ತಬಲಾ ನಾಣಿ, ಪ್ರತಾಪ್, ಮಿತ್ರ್ತಾ, ಗಿರೀಶ್, ರಂಗತೇಜ, ಸಂಧ್ಯಾಶ್ರೀ, ಶ್ರಿ ಗೌರಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed